Monday, March 22, 2010

ಯುಗಾದಿ ಮರಳಿ ಬಂದಿದೆ...


ಹೊಸವರುಷದ ಶುಭೋದಯದಲಿ......
ಎಲ್ಲರ ಮನದ ಕಿಟಕಿ ಬಾಗಿಲು ಸದಾ
ತೆರೆದಿರಲಿ .. ಮನ ಸಂತಸದ ಬೀಡಾಗಿ ಹಿಗ್ಗಿ ಹಿರಿಯಲಿ..........
ತಾನು ಶಾಂತಿ ಸಂಭ್ರಮ ನೆಮ್ಮದಿಯ...........
ಜಗದ ಎಲ್ಲ ತಪ್ತ ಮನಗಳಿಗೆ ಎರೆದು ಧನ್ಯವಾಗಲಿ ಈ ಜೀವನ ..

Sunday, March 21, 2010

ನಮ್ಮ ಮನು ಯಾವ ಜಾತಿ?




ಇವತ್ತು ಬೆಳಿಗ್ಗೆ ನಾನು ಗೇಟಿನ ಹೊರಗೆ ನೀರು ಹಾಕಲೆಂದು ಹೊರಗೆ ಬಂದೆ . ಮನು ಹಾಗೆ ಚಿನ್ನಾಟ ಆಡುತ್ತ ಓಡಾಡುತ್ತಿದ್ದ. ರಂಗೋಲಿ ಇಡಬೇಕಿತ್ತು.ಅವನನ್ನು ಹೊರಗೆ ಬಿಟ್ಟೆ. ಅವನಿಗೆ ಅದೇ ಸಂಭ್ರಮ.ಅತ್ತ ಇತ್ತ ದಾರಿಯಲ್ಲಿ ಕುಣಿದಾಡಿ ಬೀದಿಯಲ್ಲಿ ಬರುವಮಕ್ಕಳ ಹಿಂದೆ ಅವನು.ಅವನ ಹತ್ತಿರ ಹೋದ ಹಾಗೆ ಒಂದು ಮುದ್ದಾದ ಎರಡೂವರೆ ವರ್ಷದ ಮಗು ಆಸೆಗಂಗಳಿಂದ ಅವನನ್ನೇನೋಡುತ್ತಾ ಹಿಂದೆ ಸರಿದು ರಸ್ತೆಯ ಮೂಲೆಯ ಬೆಂಚಿನ ಮೇಲೆ ಹತ್ತಿ ನಿಲ್ಲಿತು. ಮಗು ಬಹಳ ಮುದ್ದಾಗಿತ್ತು.
"ಅವನೇನು ಮಾಡೋಲ್ಲ ಆಟ ಆಡು ಮಗು" ಎಂದೆ ನಾನು.
"ಇಲ್ಲ", ಬಿಗುಮಾನದ ಉತ್ತರ.
ನಾನು ಅನುನಯಿಸಿದೆ
."ಬಾ ನಾವಿಬ್ಬರು ಆಟ ಆಡೋಣ ಅವನ ಜೊತೆ".
"ಬೇಡ", ಇನ್ನು ಬಿಗಿಯಾಯಿತು ಮುಖ.........
ಮನುಗೆ ನನ್ನ ಹಾಗೆ ಸಣ್ಣ ಮಕ್ಕಳ ಜೊತೆ ಆಡಲಿಕ್ಕೆ ಬಹಳ ಪ್ರೀತಿ.
"ಬಾ ಮನು ಒಳಗೆ,ಅಣ್ಣ ಬರ್ತಾನೆ ನಿನ್ನ ಜೊತೆ ಆಡಲಿಕ್ಕೆ" ಎಂದು ಮನುವನ್ನು ಒಳಗೆ ಕರೆದೆ. ಅವನೂ ಬರೋಹಾಗಿಲ್ಲ...........

ನನಗೆ ಒಳಗೆ ಕೆಲಸ ಕೈ ಬೀಸಿ ಕರೆಯುತ್ತಿದೆ.
ಬೆಳಬೆಳಿಗ್ಗೆ ಇದೇನಿದು ಮಕ್ಕಳ ಆಟ........ನಾ ಒಳಹೊರಟೆ.

"
ಆಂಟಿ ಆಂಟಿ ಪ್ಲೀಸ್, ನಿಮ್ಮ ಮನು ಹತ್ರ ಸ್ವಲ್ಪ ಮಾತಾಡಬಹುದ?". ಸ್ವಲ್ಪ ವಾತಾವರಣ ಸಡಿಲವಾಯಿತು.

"Oh Sure". (Half the battle is Won)............

"ಆದರೇ...................... ಆವನು ನಿಮ್ಮ ಜೊತೆ ಒಳಗೆ ಬಂದುಬಿಡುತ್ತಾನಲ್ಲ!!!!!"
"ಬರಲಿ.....ನೀನು ಕೂಡ ಬಾ..." ನಾ ಖುಷಿಯಿಂದ ಹೇಳಿದೆ.

"ಇಲ್ಲ .....ನಾನ್ ಬರಲ್ಲ...." ತಕ್ಷಣದ ಒರಟು ಉತ್ತರ...

"ಯಾಕಪ್ಪ"??

ಮಗು ಬಹಳ ಹಿಂಸೆಯಿಂದ ........
"ನಾವು ಸಾಬರು"!!!!!!!!!!!!!!!!!!!!!!!!!!!!!!!

ನಾನು ಅವಾಕ್ಕಾದೆ. ......ಛೆ...
ಮನುಗಿಲ್ಲದ ಜಾತಿ ಮಗುವನ್ನೇಕೆ ಈಗಲೇ ಕಾಡುತ್ತಿದೆ..ಸಣ್ಣ ವಯಸ್ಸಿನಲ್ಲಿ ಮಗುವಿನಮನಸ್ಸಿನಲ್ಲಿ ಜಾತಿ, ವೈಷಮ್ಯದ ಬೀಜ ಬಿತ್ತಿದ ದುರಂತಮಯ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ...